Posts

Showing posts from February, 2018

ಬೆಲ್ಲದ ಸಿಹಿ ಕರದಂಟು

Image
ಬೇಕಾಗುವ ಸಾಮಾನು ಹುರಿಗಡಲೆ ಹಿಟ್ಟು ಅಥವಾ ಪುಟಾಣಿ ಹಿಟ್ಟು 3 ಲೋಟ ಪುಡಿ ಮಾಡಿದ ಬೆಲ್ಲ 2 1/2 ಲೋಟ ಗಸಗಸೆ ಸ್ವಲ್ಪ ಒಣ ಕೊಬ್ಬರಿ ತುರಿ ಸ್ವಲ್ಪ ತುಪ್ಪ 4 ಚಮಚ ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ಬೆಲ್ಲದಪುಡಿ ಹಾಕಿ ಸ್ವಲ್ಪ ನೀರು ಹಾಕಿ ಸಣ್ಣ ಉರಿಯಲ್ಲಿ ಬೆಲ್ಲ ಕರಗಿಸಿ ಒಂದೆಳೆ ಪಾಕ ತಯಾರಸಿ ನಂತರ gas off ಮಾಡಿ ತುಪ್ಪ ಹಾಕಿ ಸೌಟಾಡಿಸಿ ಆಮೆಲೇ ಹುರಿಗಡಲೆ ಹಿಟ್ಟು ಹಾಕಿ ಚನ್ನಾಗಿ ಸೌಟಾಡಿಸಿ ಒಂದು ತುಪ್ಪ ಸವರಿದ ತಟ್ಟೆಗೆ ಹಾಕಿ ಮೇಲೆ ಒಣ ಕೊಬ್ಬರಿ ತುರಿ ಮತ್ತು ಗಸಗಸೆ ಉದುರಿಸಿ ಸ್ವಲ್ಪ ಆರಿದ ನಂತರ ಬೇಕಾದ ಆಕಾರಕ್ಕೆ ಕಟ್ ಮಾಡಿದರೆ ಕರದಂಟು ಸಿದ್ದವಾಗುತ್ತದೆ.

ಆಲೂ ಪರೋಟ...

Image
# ಬೇಕಾಗುವ_ಸಾಮಗ್ರಿಗಳು : # ಕಣಕಕ್ಕೆ : ಗೋಧಿ ಹಿಟ್ಟು:10 ಪರೋಟ ಆಗೋ ಅಷ್ಟು. ಉಪ್ಪು:ರುಚಿಗೆ ತಕ್ಕಷ್ಟು ಎಣ್ಣೆ: 10ಚಮಚ # ಹೂರಣಕ್ಕೆ : ಬೇಯಿಸಿದ ಆಲೂ:5 ಹಸಿ ಮೆಣಸಿನ ಕಾಯಿ:ಖಾರಕ್ಕೆ ತಕ್ಕಷ್ಟು(ನಾನು 8 ಬಳಸಿದ್ದೇನೆ) ಶುಂಠಿ : ಒಂದು ಇಂಚು ಬೆಳ್ಳುಳ್ಳಿ: 3ಬೇಳೆ (optional) ಕೊತ್ತಂಬರಿ ಸೊಪ್ಪು(ಸಣ್ಣ ಹಿಡಿ) ಉಪ್ಪು,ಅರಿಶಿಣ, ಎಣ್ಣೆ,ಜೀರಿಗೆ . # ವಿಧಾನ : ಮೊದಲು ಗೋಧಿಹಿಟ್ಟಿಗೆ ಉಪ್ಪು ಹಾಗೂ 10ಚಮಚ ಎಣ್ಣೆ ಹಾಕಿ ಮೃದುವಾಗಿ ಕಲೆಸಿ ನಂತರ ನೀರು ಹಾಕಿ ಕಲೆಸಿಟ್ಟು ಮೇಲೆ ಒಂದು ಚಮಚ ಎಣ್ಣೆ ಹಾಕಿ ನೆನೆಯಲು ಬಿಡಿ. ಬೇಯಿಸಿದ ಆಲೂವನ್ನು ತುರಿದಿಟ್ಟು ಕೊಳ್ಳಿ. ಮಿಕ್ಸಿಲಿ ಮೆಣಸಿನಕಾಯಿ,ಕೊತ್ತಂಬರಿ ಸೊಪ್ಪು,ಶುಂಠಿ,ಬೆಳ್ಳುಳ್ಳಿ ಸ್ವಲ್ಪ ಉಪ್ಪು ಹಾಕಿ ಗ್ರೈಂಡ್ ಮಾಡಿಟ್ಟುಕೊಳ್ಳಿ. ಒಂದು ಕಡಾಯಿಯಲ್ಲಿ 2ಚಮಚ ಎಣ್ಣೆ,ಜೀರಿಗೆ (ಅಥವಾ ಜಿರಾ ಪುಡಿ) ,ಅರಿಶಿನ ಹಾಕಿ ಗ್ರೈಂಡ್ ಮಾಡಿದ್ದನ್ನು ಹಾಕಿ ಖಾರದ ಹಸಕು ವಾಸನೆ ಹೋಗೋವರೆಗೂ ಕೈಯಾಡಿ....ಇದಕ್ಕೆ ಉಪ್ಪು ಹಾಕಿ,ತುರಿದ ಆಲೂ ಹಾಕಿ ಚನ್ನಾಗಿ ಮಿಕ್ಸ್ ಮಾಡಿ ಆರಲು ಬಿಡಿ. ನಂತರ ಒಂದು ಚಪಾತಿಗೆ ಬೇಕಾಗುವದಕ್ಕಿಂತ ಸ್ವಲ್ಪ ಕಮ್ಮಿ ಪ್ರಮಾಣದ ಕಣಕವನ್ನು ತೆಗೆದುಕೊಂಡು ಅದರಮೇಲೆ ಒಂದು ನಿಂಬೇ ಗಾತ್ರ(ಬೇಕಾದರೆ ಸ್ವಲ್ಪ ಜಾಸ್ತಿ )ಹೂರಣವನ್ನು ಇಟ್ಟು ಮಡಚಿ ಲಟ್ಟಿಸಿ,ಬೇಯಿಸಿ.... ಬೇಯಿಸಲು ಎಣ್ಣೆ ಬೇಕಾದರೂ ಬಳಸ ಬಹುದು.... ಅಥವಾ ಅಮುಲ್ ಬೆಣ್ಣೆ ಕೂಡ ಬಳಸ ಬಹುದು. ...

ಬದನೆಕಾಯಿ ರಸದ ಎಣ್ಣೆ ಮಸಾಲೆ.

Image
ಈರುಳ್ಳಿ.. ಬದನೆಕಾಯಿ ಕುಕ್ಕರ್ ನಲ್ಲಿ ಕುದಿಸಿ ನಂತರ ಕುದಿಸಿದ ಬದನೆಕಾಯಿ ..ಹಸಿ ಮೆಣಸಿನಕಾಯಿ.. ಕರಿಮೆಣಸು.. ಎಳ್ಳು.. ಒಣಕೊಬ್ಬರಿಪುಡಿ.. ಉಪ್ಪು.. ಹುಣಸೆ ರಸ.. ಜೀರಿಗೆ ಮೊಸರು ಚಕ್ಕೆ.. ಮಸಾಲೆ ಎಲೆ ಹಸಿ ಕೊಬ್ಬರಿ ತುರಿ ಈ ಎಲ್ಲ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ .. ನಂತರ ಕುಕ್ಕರ್ ನ ಪ್ಯಾನಲ್ಲಿ ಎಣ್ಣೆ ವಗ್ಗರಣೆಹಾಕಿ ಉದ್ದಿನಬೇಳೆ ಕಡ್ಲೆಬೇಳೆ ಸಾಸವೆ ಕರಿಬೇವು ಒಣಮೆಣಸಿನಕಾಯಿ ತುಂಡು ಹಾಕಿ ಬಾಡಿಸಿ ನಂತರ ಬಿಸಿ ನೀರು ಹಾಕಿ ರುಬ್ಬಿದ ಬದನೆಕಾಯಿ ಕಾರ ಮಿಶ್ರಣ ಸೇರಿಸಿ ನಂತರ ಕುದಿಸಿದ ಈರುಳ್ಳಿಯನ್ನು ಹಾಕಿ ಒಂದು ವಿಶಲ್ ಕೂಗಿಸಿ ಚೆನ್ನಾಗಿ ಕಾಸಿದ ಹಿಂಗು ಮಿಶ್ರಿತ ಎಣ್ಣೆ ಹಾಕಿ ಒಳ್ಳೆಯ ಕಾರದ ಎಣ್ಣೆ ಬದನೆಕಾಯಿ ಮಸಾಲೆ ರೆಡಿ ಇದು ಮೃದುವಾದ ಪಲ್ಯ ಖಡಕ ರೊಟ್ಟಿ ಗೆ ಓಕೆ ಏಗನೂರು ಟೆಂಪಲ ಹೇಮಶೈಲೇಂದ್ರ

ಟೊಮ್ಯಾಟೋ ಗೊಜ್ಜು

Image
ಎರಡು ಟೊಮ್ಯಾಟೋ ಸಣ್ಣಗೆ ಕಟ್ಟ ಮಾಡಿ ಹಾಗೆ ಕೋತಂಬ್ರಿನು ಕಟ್ಟ ಮಾಡಕೊಳ್ಳಿ ಎರಡು ಗಡ್ಡೆ ಬಳ್ಳೊಳ್ಳಿ ಸೊಪ್ಪೆ ತಗೆದು ಇಡಿ ಈಗ ಒಗ್ಗರಣೆ ಮಾಡಿ ಒಗ್ಗರಣೆಗೆ ಎರಡು ಸ್ಪೂನ್ ಎಣ್ಣೆ ಹಾಕಿ ಒಂದು ಕಡಾಯಿಗೆ, ಎಣ್ಣೆ ಕಾದ ನಂತರ ಜೀರಿಗೆ ಸಾಸುವೆ, ಚಟಪಡಿಸಿ, ಕರಿಬೇವು ಜಜ್ಜಿದ ಒಳ್ಳೊಳ್ಳಿ ಉಪ್ಪು ಅರಶಿನ ಪುಡಿ ಕಾರದ ಪುಡಿ, ಸಣ್ಣಗೆ ಕಟ್ಟ ಮಾಡಿದ ಟೊಮ್ಯಾಟೋ, ಹಾಗೆ ಶೇಂಗಾ ಪುಡಿ ಹಾಕಿ ಕೋತಂಬ್ರಿನು ಹಾಕಿ ಚನ್ನಾಗಿ ಮಿಕ್ಸ್ ಮಾಡಿ ನೀರು ಹಾಕದೆ ಬೇಯಲು ಬಿಡಿ ಎರಡು ನಿಮಿಶ, ನಂತರ ಚಪಾತಿ ಜೊತೆ ತಿನ್ನಲು ಕೊಡಿ, ಸೂಪರ್ ಇರುತ್ತೆ. ಅನ್ನದ ಜೊತೆ ರೊಟ್ಟಿ ಜೊತೆನು ಚನ್ನಾಗಿ ಇರುತ್ತೆ ಮಾಡಿ ನೋಡಿ ಫ್ರೆಂಡ್ಸ್.

Maavinakayi tambuli.

Image
Mixer ge coconut, turida mavinkayi, salt, hing, hasi mensu, swalpa ootada mosru haaki nunnage paste maadi. Amele paatre ge transfer maadi neeru haaki tellage maadi. Tuppada vagarane kodi.

Veg ನೂಡಲ್ಸ್ಜೊwith ಮಾಕ್ರೋನಿ

Image
ಇದು ಮಕ್ಕಳಿಗೆಲ್ಲ ಬಲು ಪ್ರಿಯ ಆದ್ರೆ ಹೆಚ್ಚಿಗೆ ತಿನ್ನಿಸ್ಬೇಡಿ...ಗೋಧಿದು ಸಿಕ್ಕಿದ್ರೆ ತುಂಬಾ ಒಳ್ಳೆದು ಹಾಗಾದ್ರೂ ತರಕಾರಿ ಹೊಟ್ಟೆಗೆ ಹೋಗುತ್ತೆ...ಕೆಲ ಮಕ್ಕಳು ತರ್ಕಾರಿ ತಿನ್ನಲ್ಲ...ನಾನು ತಿಂಗಳಲ್ಲಿ ಒಂದೆರೆಡು ಬಾರಿ ಮಾಡ್ತೀನಿ ಅಷ್ಟೇ... *ನಾನು Maggie Atta Noodles ಮತ್ತು Bambino Macroni ಉಪಯೋಗಿಸಿದ್ದೀನಿ... ಚೆನ್ನಾಗಿತ್ತು...ನೀವೂ ಮಾಡಿ ನೋಡಿ *ಮೊದಲು ಕುಧಿಯೋ ನೀರಿಗೆ ಎರೆಡು ಚಮಚ ಅಡಿಗೆ ಎಣ್ಣೆ ಅಥವಾ Vinegar ಹಾಕಿ ಮಾಕ್ರೋನಿ (2Cup)ಹಾಕಿ ಎರೆಡು ನಿಮಿಷ ಬಿಟ್ಟು ಬಸಿದು ಇಟ್ಕೊಳಿ... *ತರಕಾರಿ ಎಲ್ಲ ಉದ್ದುದ್ದ(Julian)Cut ಮಾಡಿ ಇಟ್ಕೊಳಿ... *ಈಗ ಒಂದು ಅಗಲವಾದ ಬಾಣಲೆಗೆ ಎಣ್ಣೆ ಹಾಕಿ ಕಾದ ಮೇಲೆ cut ಮಾಡಿದ ಈರುಳ್ಳಿ ಬೆಳ್ಳುಳ್ಳಿ ತರಕಾರಿ ಹುರಿದು ಕಾಳು ಮೆಣಸಿನ ಪುಡಿ,White Pepper pwdr, ಖಾರದ ಪುಡಿ, ಟೊಮೆಟೊ/Chilly/ಸೋಯಾ Sauce ಮೂರು ಎರೆಡೆರಡು ಚಮಚ ಹಾಕಿ 5Cups ನೀರು ಉಪ್ಪು ಹಾಕಿ ಕುದಿಯುವಾಗ ಬಿಸಿ ನೀರಲ್ಲಿ ಹಾಕಿ ಬಸಿದ ಮಾಕ್ರೋನಿ ಒಂದು Pkt Maggie (ಮಾಸಾಲೆಯೊಂದಿಗೆ)ಮುರಿದು ಹಾಕಿ 2ನಿಮಿಷ ಬಿಟ್ಟು Off ಮಾಡಿ 10ನಿಮಿಷ ಬಿಟ್ಟು Sauce ಹಾಕಿಕೊಂಡು ಜಮಾಯಿಸಿ... *ಇದು ಮೂರು ಜನಕ್ಕೆ ಆಗುತ್ತೆ* *ಮಕ್ಕಳಿಗೆ Lunch Box ಗೆ ಕಳಿಸೋದಾದ್ರೆ ಸ್ವಲ್ಪ ನೀರು ಜಾಸ್ತಿ ಹಾಕಿ ಮಾಡಿ ಕೊಟ್ಟರೆ ಒಣಗಿದ ಹಾಗೆ ಆಗದೆ fresh ಇರುತ್ತೆ* *ನೋಡ್ಕೋಳಿ ಮಾಡ್ಕೊಳಿ ತಿನ್ಕೊಳಿ ತುಂಬ...

ಅವಲಕ್ಕಿ ಇಡ್ಲಿ,ಹೋಟೆಲ್ ಸ್ಟೈಲ್ ಸಾಂಬಾರ್

Image
ಗಟ್ಟಿ ಅವಲಕ್ಕಿ-1ಕಪ್ ರವೆ-11/2ಕಪ್(Bombay rava) ಉಪ್ಪು-ರುಚಿಗೆ ಮೊಸರು-11/2ಕಪ್ 1.ಅವಲಕ್ಕಿ ತೊಳೆದು ಮೊಸೂರು ಹಾಕಿ 10 ನಿಮುಷ ನೆನಸಿಡಿ. 2.ನೆನಸಿದ ಅವಲಕ್ಕಿನ ರುಬ್ಬಿ. 3.ರುಬ್ಬಿದ ಅವಲಕ್ಕಿಗೆ ಹುರಿದ ರವೆ ಹಾಕಿ mix ಮಾಡಿ.ಉಪ್ಪು ಬೆರೆಸಿ 10 ನಿಮುಷ ಮುಚ್ಚಿಡಿ.ಈ ಹಿಟ್ಟು ಗಟ್ಟಿ ಆದರೆ ನೀರು ಬೆರೆಸಿ ಇಡ್ಲಿ ಹಿಟ್ಟಿನ ಅದಕ್ಕೆ ಹಿಟ್ಟು ತಯಾರಿಸಿ.ಇಡ್ಲಿ ಪ್ಲೇಟ್ ಗೆ ಎಣ್ಣೆ ಸವರಿ ಹಿಟ್ಟನ್ನು ಹಾಕಿ ಬೇಯಿಸಿ.10 ರಿಂದ 15 ನಿಮುಷ ಬೇಯಿಸಿದರೆ ಇಡ್ಲಿ ರೆಡಿ. ಇದಕ್ಕೆ ಬೇಕಾದರೆ ಸಣ್ಣಕೆ ಹಚ್ಚಿದ ಈರುಳ್ಳಿ,ಕ್ಯಾರಟ್,ಕೊತ್ತಂಬರಿ ಸೊಪ್ಪು, mix ಮಾಡಿ ಮಾಡಬಹುದು. # ಹೋಟೆಲ್ ಸ್ಟೈಲ್ ಸಾಂಬಾರ್ 1ದನಿಯ-1ಸ್ಪೂನ್ 2.ಜೀರಿಗೆ-1/2ಸ್ಪೂನ್ 3.ಮೆಂತೆ-1/4ಸ್ಪೂನ್ 4.ಕಡ್ಲೆಬೇಳೆ-1/2ಸ್ಪೂನ್ 5.ಉದ್ದಿನಬೇಳೆ-1/2ಸ್ಪೂನ್ 6.ಅಕ್ಕಿ-1/4ಸ್ಪೂನ್ 7.ಚೆಕ್ಕೆ-1/4ಇಂಚು 8.ಎಲಕ್ಕಿ-1 9.ಒಣಮೆಣಸು-ನಿಮ್ಗೆ ರುಚಿಗೆ 10.ಕಾಯಿತುರಿ-4ಸ್ಪೂನ್ 11.ತೊಗರಿಬೇಳೆ-1/4 ಕಪ್ 12.ಟೊಮ್ಯಾಟೊ-2 13.ಈರುಳ್ಳಿ-2 14.ಉಪ್ಪು-ರುಚಿಗೆ 15.ಗರಮ್ ಮಸಾಲ ಪುಡಿ-1/4ಸ್ಪೂನ್ 1.ತೊಗರಿಬೇಳೆ, ಟೊಮೆಟೊ, ಈರುಳ್ಳಿ, ಹಸಿಮೆಣಸಿನ ಕಾಯಿ,ಹಾಕಿ ಚೆನ್ನಾಗಿ ಬೇಯಿಸಿ. 2.ಒಂದು pan ಗೆ ಎಣ್ಣೆ, ಹಾಕಿ,ಮೆಂತೆ,ದನಿಯ,ಜೀರಿಗೆ,ಕಡ್ಲೆಬೇಳೆ, ಉದ್ದಿನಬೇಳೆ, ಚೆಕ್ಕೆ,ಒಣಮೆಣಸಿನಕಾಯಿ,ಸೊಲ್ಪ ಅಕ್ಕಿ,ಇಂಗು,ಕರಿಬೇವು , ಒಂದು ಎಲ...

ಕೋಫ್ತಾ_ಖಡಿ

Image
ಇಂದೊಂದು ಗುಜರಾತಿ ಡಿಶ್ ಆಗಿದ್ದು ಪನ್ನೀರ್ ಕೋಫ್ಟ್ ಮತ್ತು ಬೇಸನ್ ಘಟ್ಟ ಅದ ಮಿಶ್ರಣ ದ ಗ್ರೇವಿ ಆಗಿದೆ *ಮೊದಲಿಗೆ ಪನ್ನೀರ್ ಅನ್ನು ತುರಿದು ಇದಕ್ಕೆ ಕಡ್ಲೆ ಹಿಟ್ಟು, ಅಕ್ಕಿಹಿಟ್ಟು,ಸಣ್ಣ ರವೆ(ಎಲ್ಲ ೧ ಸ್ಪೂನ್) ಕೆಂಪು ಖಾರದ ಪುಡಿ, ಅರಶಿಣ, ಉಪ್ಪು ಹಾಕಿ ಚೆನ್ನಾಗಿ ಕಲಸಿ ಉಂಡೆಗಳಾಗಿ ಮಾಡಿ *ಉಂಡೆಗಳನ್ನು ಸಣ್ಣ ಉರಿಯಲ್ಲಿ ಚೆನ್ನಾಗಿ ಕೆಂಪಗೆ ಕರೆದುಕೊಳ್ಳಿ * ಪಾತ್ರೆ ಗೆ ಎಣ್ಣೆ ಹಾಕಿ ಸಾಸಿವೆ,ಜೀರಿಗೆ,ಕಡ್ಲೆಬೇಳೆ ಒಗ್ಗರಣೆ ಮಾಡಿ ಇದಕ್ಕೆ ಒಣ ಮೆಣಸಿನಕಾಯಿ(ಬಾಳಕ)ಹಾಕಿ ಹಿಂಗಿನ ಒಗ್ಗರ್ಣೆ ಮಾಡಿ * ಒಗ್ಗರಣೆ ಗೆ ಸಣ್ಣ ಹೆಚ್ಚಿದ ಈರುಳ್ಳಿ, ಟೊಮೆಟೊ, ಹಾಕಿ ಚೆನ್ನಾಗಿ ಫ್ರೈ ಮಾಡಿ ಇದಕ್ಕೆ ಖಾರದ ಪುಡಿ, ಅರ್ಷಿನಾ, ಉಪ್ಪು, ಚಿಟಿಕೆ ಸಕ್ಕರೆ ಹಾಕಿ ಬಾಡಿಸಿ * ಬೆಂದ ಮಸಾಲೆ ಗೆ ೧ ಲೋಟ ಮಜ್ಜಿಗೆ ಹಾಕಿ, ೧ ಸ್ಪೂನ್ ಕಡ್ಲೆ ಹಿಟ್ಟು, ಬೇಕಾದಷ್ಟು ನೀರು ಹಾಕಿ ಚೆನ್ನಾಗಿ ಕುದಿಸಿ * ಕುದಿದ ಸಾರಿಗೆ, ಕರೆದ ಕೋಫ್ತ ಹಾಕಿ ಸಣ್ಣ ಉರಿಯಲ್ಲಿ ೫ ನಿಮಿಷ ಕುದಿಸಿ, ಖಾರಸೆವು(mixture) haaki swalpa ಕುದಿಸಿ ಸಣ್ಣ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ಕೋಫ್ತಾ ಕಡಿ ತಯಾರು

ಕೆಜಿ ಅವಲಕ್ಕಿನ 2 ಭಾಗ ಮಾಡಿ

Image
ಒಂದು ಕೆಜಿ ಅವಲಕ್ಕಿನ 2 ಭಾಗ ಮಾಡಿ ಒಂದು ಭಾಗ ನೀರಲ್ಲಿ ನೆನೆಸಿ.. ಎಷ್ಟು ಗಂಟೆಗಳ ಕಾಲ ನೆನೆಸಿಟ್ತಿವೊ ಅಷ್ಟು ಚನ್ನಾಗಿ ಬರುತ್ತೆ. ಅವಲಕ್ಕಿ ಯ ಇನ್ನೊಂದು ಭಾಗವನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಲಿ ಚಿಕ್ಕ ಮಿಕ್ಸಿ ಜಾರ್ ನಲ್ಲಿ ರುಚಿಗೆ ತಕ್ಕಷ್ಟು ಉಪ್ಪು ರುಚಿಗೆ ತಕ್ಕಷ್ಟು ಹಸಿ ಮೆಣಸಿನಕಾಯಿ ಇಂಗು ಜೀರಿಗೆ ಹಾಕಿ ಪೆಸ್ಟ್ ಮಾಡಿಕೊಳ್ಳಿ ನೆನಸಿದ ಅವಲಕ್ಕಿಯನ್ನು ನೀರಿಂದ ಹಿಂಡಿ ತೆಗೆದು , ಇ ಪುಡಿ ಮಾಡಿಟ್ಟು ಕೊಂಡ ಅವಲಕ್ಕಿಯನ್ನು ಮತ್ತೆ ಅ ಹಸಿಮೆಣಸಿನಕಾಯಿ ಪೆಸ್ಟ್ ನ್ನು ಹಾಕಿ ಚನ್ನಾಗಿ ಮಿಕ್ಸ್ ಮಾಡಿ.. ನೀರಿನ ಅವಶ್ಯಕತೆ ಇರುವುದಿಲ್ಲ. ನಂತರ ಇ ಮಿಶ್ರಣವನ್ನು ಲಟ್ಟಣಿಗೆ ಯಿಂದ ಚನ್ನಾಗಿ ಸ್ಮಶ್ ಮಾಡಿ. ನಂತರ ಇದನ್ನು ಚಿಕ್ಕ ಹುಂಡೆ ಮಾಡಿಕೊಂಡು ಲಟ್ಟಿಸಿ ಬಿಸಿಲಿನಲ್ಲಿ ಒಣಗಿಸಿ.

sweet corn palav ಮಾಡುವ ವಿಧಾನ ..

Image
ಮಸಾಲೆ ರುಬ್ಬುವುದಕ್ಕೆ 1.ಗೋಡಂಬಿ 3ಚಮಚ 2.ಕಾಳು ಮೆಣಸು 1ಚಮಚ 3.ಶುಂಠಿ ಮತ್ತು ಬೆಳ್ಳುಳ್ಳಿ 4.ಚಕ್ಕೆ ಸ್ವಲ್ಪ , ಲವಂಗ 3 5.ಏಲಕ್ಕಿ 1 ಇವಿಷ್ಟನ್ನೂ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ .. cooker ಗೆ ಸ್ವಲ್ಪ oil ಮತ್ತು ತುಪ್ಪ ಹಾಕಿ ಮಸಾಲೆ ಪದಾರ್ಥಗಳನ್ನೆಲ್ಲಾ ಹಾಕಿ ಹುರಿಯಿರಿ ( ಪಲಾವ್ ಎಲೆ , ಮರಾಠಿ ಮೊಗ್ಗು , ಚಕ್ರ ಮೊಗ್ಗು ) . ನಂತರ ಈರುಳ್ಳಿ ಮತ್ತು ಹಸಿ ಮೆಣಸು ಹಾಕಿ ಹುರಿದ ನಂತರ sweet corn ಹಾಕಿ ಹುರಿಯಿರಿ . ರುಬ್ಬಿದ ಮಸಾಲೆ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದು 1 glass ಅಕ್ಕಿ ಹಾಕಿರಿ . ಅದಕ್ಕೆ 1/4 glass ಹಾಲು ಅಥವಾ ತೆಂಗಿನಕಾಯಿ ಹಾಲು , 1 & 1/2 glass ನೀರು ಹಾಕಿ , ರುಚಿಗೆ ತಕ್ಕಷು ಉಪ್ಪು , ಕೋತಂಬರಿ ಸೊಪ್ಪು ಹಾಕಿ 1ರಿಂದ 2 whistle ತೆಗೆದುಕೊಳ್ಳಿ ... ಪೂರ್ತಿ recipe ವೀಡಿಯೋ ನೋಡಲು ಈ ಕೆಳಗಿನ ಲಿಂಕ್ ಅನ್ನು ಒತ್ತಿರಿ https://youtu.be/Ddk0f-ZwYJU

sweet corn masala

Image
Chapathi jothege chennagi hondutte Sweet corn bidisi ready madi 1 onion 4 esalu bellulli Shunti 1 inch Tengina turi 1/2 cup Tomato 1 Hurida ellu 1 spoon Gasagase 1 spoon Sompu 1/2 spoon Chakke swalpa Hurida kempu menasina kai (can use red chilli powder also) Ella haki grind madi Cooker nall Vaggaranege sasive, uddina be look e, kadale bele haki badisii, nantara erullihaki, nanu swalpa capsicum kooda hakidde... Badisi, grind madiro gravy haki, uppu haki, 2whistle koogusi.. Sweet corn masala ready... Serve with hot chaoathi

ಮೋಹನ್ ತಾಲ್

Image
ಬೇಕಾಗುವ ಸಾಮಗ್ರಿಗಳು ಸಕ್ಕರೆ ಎರಡು ಬಟ್ಟಲು ಕಡಲೆಹಿಟ್ಟು ಒಂದುಕಪ್ ಮಿಲ್ಕ್ ಪೌಡರ್ ಒಂದು ಕಪ್ ರೀಫೈಂಡ್ ಆಯಿಲ್ ಒಂದು ಕಪ್ ತುಪ್ಪ ಒಂದು ಕಪ್ ಬಾದಾಮಿ, ಗೋಡಂಬಿ ಮಿಕ್ಸಿಯಲ್ಲಿ ಹಾಕಿ ಸಣ್ಣಗೆ ಮಾಡಿಕೊಳ್ಳಿ ಮಾಡುವ ವಿಧಾನ ಸಕ್ಕರೆಗೆ ಒಂದು ಕಪ್ ನೀರುಹಾಕಿ ಪಾಕ ಮಾಡಿಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ರೀಫೈಂಡ್ ಆಯಿಲ್, ಕಡಲೆ ಹಿಟ್ಟು, ಮಿಲ್ಕ್ ಪೌಡರ್ ಹಾಕಿ ಚೆನ್ನಾಗಿ ಕಲಸಿ. ನಂತರ ಸಕ್ಕರೆ ಪಾಕ ನೊರೆ ಬರುತ್ತಿದ್ದಂತೆ ಈ ಮಿಶ್ರಣವನ್ನು ಹಾಕಿ ಚೆನ್ನಾಗಿ ತಳ ಹಿಡಿಯದಂತೆ ತಿರುಗಿಸಿ. ನಂತರ ತುಪ್ಪ ಹಾಗೂ ಗೋಡಂಬಿ ಹಾಕಿ ಕಲಸಿ. ತಳ ಬಿಟ್ಟ ನಂತರ ತುಪ್ಪ ಜಿನುಗಿ ಬರಲಾರಂಭಿಸುತ್ತಿದ್ದಂತೆ ಕೆಳಗಿಳಿಸಿ. ಮೊದಲೇ ತಟ್ಟೆ ಯೊಂದಕ್ಕೆ ತುಪ್ಪ ಸವರಿ ಇಟ್ಟಿರುವ. ಇದನ್ನು ಆ ತಟ್ಟೆಗೆ ಹಾಕಿ ಬೇಕಾದ ಆಕಾರದಲ್ಲಿ ಕತ್ತರಿಸಿದರೆ ಮೋಹನ್ ತಾಲ್ ರೆಡಿ. ಅಲಂಕಾರಕ್ಕೆ ಗೋಡಂಬಿ, ದ್ರಾಕ್ಷಿ ಹಾಕಿ.

ಅವಲಕ್ಕಿ ಮಿಲ್ಕ್ ಶೇಕ್

Image
ಹೊಸ ರುಚಿ,ಹೊಸ ತರಹದ ಅವಲಕ್ಕಿ ಮಿಲ್ಕ್ ಶೇಕ್ ನೀವು ಫ್ರೂಟ್ಸ್,ವೆಜಿಟೇಬಲ್ ಮಿಲ್ಕ್ ಶೇಕ್ ಮಾಡಿರ್ತಿರಿ ಆದರೆ ಅವಲಕ್ಕಿ ಮಿಲ್ಕ್ ಶೇಕ್ ಮಾಡಿದ್ದೀರಾ. ಇಲ್ಲಿದೆ ನೋಡಿ ಅವಲಕ್ಕಿ ಮಿಲ್ಕ್ ಶೇಕ್. ಇದು ಆರೋಗ್ಯಕ್ಕೆ ತುಂಬಾ ಒಳ್ಳೆದು. ೧.ಪೇಪರ್ ಅವಲಕ್ಕಿ 1ಕಪ್ ೨.ಹಾಲು 2ಕಪ್ ೩.ಸಕ್ಕರೆ 8ಸ್ಪೂನ್ ೪.ಗೋಡಂಬಿ ೫.ಬಾದಾಮಿ ೬.ಎಲಕ್ಕಿ ಮಾಡುವ ವಿಧಾನ 1.ಅವಲಕ್ಕಿ ನೀರು ಹಾಕಿ ತೊಳೆದು ನೀರು ತೆಗೆದು.ಸಕ್ಕರೆ ಬಾದಾಮಿ,ಗೋಡಂಬಿ ಹಾಕಿ ನುಣ್ಣಗೆ ರುಬ್ಬಿ. 2.ರುಬ್ಬುವಾಗ ಹಾಲು ಬೇಕಾದರೆ ಹಾಕಿ ರುಬ್ಬಿ.ನಂತರ ಒಂದು ಪಾತ್ರೆಗೆ ತೆಗೆದು ಬೇಕಾದಷ್ಟು ಹಾಲು ಎಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ ಸರ್ವ್ ಮಾಡಿ. 3.ಇದಕ್ಕೆ ಸಕ್ಕರೆ ಬೇಡಾ ಅಂದರೆ ಬೆಲ್ಲ ಹಾಕಬಹುದು.ಎಲಕ್ಕಿ ಬದಲಿಗೆ ವೆನಿಲ್ಲಾ ಎಸೆನ್ಸ್ ಹಾಕಬಹುದು.ಮಕ್ಕಳು ಸೂಪರ್ ರೋ ಸೂಪರ್ ಅಂತ ಕುಡಿತಾರೆ.

ಹೀರೆಕಾಯಿ ಸಿಪ್ಪೆಯ ಚಟ್ನಿ

Image
1. ಬಾಂಡ್ಳೆಯಲ್ಲಿ 2 ಚಮಚ ಎಣ್ಣೆ ಹಾಕಿ ಅದರಲ್ಲಿ ಹಸಿರು ಮೆಣಸಿನಕಾಯಿ,2 ಚಮಚ ಕಡಲೆ ಬೇಳೆ,ಹೀರೆಕಾಯಿ ಸಿಪ್ಪೆಯನ್ನು ಹಾಕಿ ಬಾಡಿಸಿಕೊಳ್ಳಿ. 2. ಬಾಡಿಸಿದ ಸಾಮಾಗ್ರಿಗಳೊಂದಿಗೆ ತೆಂಗಿನತುರಿ, ಉಪ್ಪು,ಹುಣಿಸೆ ಹಣ್ಣು,ಬೆಲ್ಲ ಹಾಕಿ ರುಬ್ಬಿ ಕೊಳ್ಳಿ. 3. ರುಬ್ಬಿದ ಚಟ್ನಿಗೆ ಸಾಸಿವೆ, ಉದ್ದಿನಬೇಳೆ,ಕಡಲೆಬೇಳೆ, ಒಣಮೆಣದಿನಕಾಯಿ,ಇಂಗು ಒಗ್ಗರಣೆ ಹಾಕಿ.

ಕ್ಯಾರೆಟ್_ಉಂಡೆ

Image
ಸಾಮಗ್ರಿಗಳು ಕ್ಯಾರೆಟ್ ತುರಿ 2 ಕಪ್ ಒಣ ಕೊಬ್ಬರಿ ತುರಿ 1ಕಪ್ ಸಕ್ಕರೆ 1ಕಪ್ ಅಥವಾ ಸಿಹಿಗೆ ತಕ್ಕಷ್ಟು ಏಲಕ್ಕಿ ಪುಡಿ ಒಣ ದ್ರಾಕ್ಷಿ ಗೂಡಂಬಿ ಬಾದಾಮಿ ತುಪ್ಪ ಬಾಣಲೆಯಲ್ಲಿ ತುಪ್ಪ 4 ಚಮಚ ಹಾಕಿ ಒಣದ್ರಾಕ್ಷಿ,ಗೂಡಂಬಿ ಬಾದಾಮಿ ಹಾಕಿ ಹುರಿದು ತೆಗೆದಿಡಿ. ಅದೇ ಬಾಣಲೆಯಲ್ಲಿ ಕ್ಯಾರೆಟ್ ತುರಿ ಹಾಕಿ ವಾಸನೆ ಹೊಗುವವರೆಗೂ ಹುರಿಯಬೇಕು ನಂತರ ಒಣ ಕೊಬ್ಬರಿ ತುರಿ ಹಾಕಿ ತಿರುವುತ್ತಾ ಇರಬೇಕು. ನಂತರ ಸಿಹಿಗೆ ತಕ್ಕಷ್ಟು ಸಕ್ಕರೆ ಹಾಕಿ ತಿರುವುತ್ತಾ ಇರಿ. ನಂತರ ಅದಕ್ಕೆ ಏಲಕ್ಕಿ ಪುಡಿ ಹಾಕಿ ತಿರುವಿ 5ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ನಂತರ ಮುಚ್ಚಳ ತೆಗೆದು ಹುರಿದ ಒಣ ದ್ರಾಕ್ಷಿ,ಗೂಡಂಬಿ, ಬಾದಾಮಿ ಹಾಕಿ ತಿರುವಿ ನೀರಿನಾಂಶ ಮುಗಿದ ಮೇಲೆ ಕೆಳಗೆ ಇಳಿಸಿ ಒಂದು ತಟ್ಟೆಗೆ ಹಾಕಿ ಆರಿದ ತಕ್ಷಣ ಉಂಡೆ ಮಾಡಿ.

ಕ್ಯಾರೆಟ್ ಒಬ್ಬಟ್

Image
ಇಂದಿನ ವಿಶೇಷ ಅರ್ಧ ಕೆಜಿ ಕ್ಯಾರೆಟ್ ಚೆನ್ನಾಗಿ ತೊಳೆದು ದೊಡ್ಡ ಹೋಳು ಮಾಡಿ ಕುಕ್ಕರ್ ನಲ್ಲಿ ಸ್ವಲ್ಪ ಹಾಲು ಹಾಕಿ ಎರಡು ವಿಷಲ್ ಕುಗಿಸಿ ಆರಿದ ನಂತರ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಇದಕೆ ಸಕ್ಕರೆ ಅಥವಾ ಬೆಲ್ಲ ಅಥವಾ ಎರಡು ಅರ್ಧ ಅರ್ಧ ಹಾಕಿ ಚೆನ್ನಾಗಿ ಹುರಿಯಿರಿ ಹೂರಣ ದ ಹದ ಬಂದಾಗ ಏಲಕ್ಕಿ ಪುಡಿ ತುಪ್ಪ ಹಾಕಿ ಚೆನ್ನಾಗಿ ಮಿಶ್ರ ಮಾಡಿ ಉಂಡೆ ಮಾಡಿ ಕಣಕದಲ್ಲಿಟ್ಟು ಲಟ್ಟಿಸಿ ಕಾದ ತವಾ ಮೇಲೆ ಎರಡೂ ಕಡೆ ಬೇಯಿಸಿ ತುಪ್ಪ ಹಾಕಿ ಬಿಸಿ ಬಿಸಿ ಯಾಗಿ ತಿನ್ನಿ.

ಮಸಾಲ ದೋಸೆ

Image
ಎಲ್ಲರ ಪ್ರೀತಿಯ ತಿಂಡಿ! ಹೋಟೆಲ್ ಗಳಲ್ಲಿ ಆರ್ಡರ್ ಮಾಡುವ ಮೊದಲ ತಿಂಡಿ! ಮನೆಯಲ್ಲಿಯೇ ಹೋಟೆಲಿನ ಹಾಗೆ ಗರಿ ಗರಿಯಾಗಿ ಮಾಡುವ ರೆಸಿಪಿ ಇಲ್ಲಿದೆ! ದೋಸೆ ಹಿಟ್ಟು ಮಾಡುವ ವಿಧಾನ:- ದೋಸೆ ಅಕ್ಕಿ - 4 ಲೋಟ ಉದ್ದಿನ ಬೇಳೆ - 1 ಲೋಟ ಕಡಲೇ ಬೇಳೆ - 4 ಚಮಚ ಗಟ್ಟಿ ಅವಲಕ್ಕಿ - 4 ಚಮಚ ಮೆಂತ್ಯ - 1/2 ಚಮಚ (ಬೇಕಾದರೆ) ಅಕ್ಕಿ, ಅವಲಕ್ಕಿಯನ್ನು ಒಟ್ಟಿಗೆ ತೊಳೆದು ನೆನೆಸಿಡಿ. ಉದ್ದಿನ ಬೇಳೆ, ಕಡಲೇ ಬೇಳೆ ಒಟ್ಟಿಗೆ ತೊಳೆದು, ನೆನೆಸಿಡಿ. 2 ಗಂಟೆಯ ನಂತರ ಬೇಳೆ ನುಣ್ಣಗೆ ರುಬ್ಬಿ, ನಂತರ ಅಕ್ಕಿಯನ್ನು ನುಣ್ಣಗೆ ರುಬ್ಬಿ, ಎರಡನ್ನೂ ಸೇರಿಸಿ, ಉಪ್ಪು ಸೇರಿಸಿ, ಚೆನ್ನಾಗಿ ಕಲೆಸಿ ಮುಚ್ಚಿಡಿ. Grinder ನಲ್ಲಿ ರುಬ್ಬಿದರೆ ಚೆನ್ನಾಗಿರುತ್ತೆ. ದೋಸೆ ಮಾಡುವಾಗ 4 ಚಮಚ ಅಕ್ಕಿ ಹಿಟ್ಟು, 1 ಚಮಚ ಸಕ್ಕರೆಯನ್ನು ಸೇರಿಸಿ ದೋಸೆ ಮಾಡಿದರೆ, ದೋಸೆ ಕೆಂಪಗೆ, ಗರಿಯಾಗಿ ಬರುತ್ತೆ. ದೋಸೆ ಹಿಟ್ಟು ತುಂಬಾ ತೆಳ್ಳಗೆ ಮಾಡಬೇಡಿ, ಸ್ವಲ್ಪ ಗಟ್ಟಿಯಾಗಿ ಇರಲಿ. ಕೆಂಪು ಚಟ್ನಿ ಮಾಡುವ ವಿಧಾನ:- 2 ಚಮಚ ಹುರಿಗಡಲೆ, 1 ಈರುಳ್ಳಿ, 6 ಬೆಳ್ಳುಳ್ಳಿ ಎಸಳು, 6 ಬಿಸಿ ನೀರಲ್ಲಿ ನೆನೆಸಿದ ಬ್ಯಾಡಗಿ ಮೆಣಸಿನ ಕಾಯಿ, ಉಪ್ಪು ಹಾಕಿ, ಸ್ವಲ್ಪವೇ ನೀರು ಹಾಕಿ ನುಣ್ಣಗೆ ರುಬ್ಬಿದರೆ ದೋಸೆ ಒಳಗೆ ಸವರುವ ಕೆಂಪು ಚಟ್ನಿ ಸಿದ್ಧ! ಕಾಯಿ ಚಟ್ನಿ ಮತ್ತು ಆಲೂಗೆಡ್ಡೆ ಸಾಧಾರಣವಾಗಿ ಎಲ್ಲರೂ ಮಾಡುವ ವಿಧಾನ, ಚಟ್ನಿಗೆ ಮಾತ್ರ ಹುಣಿಸೆ ರಸದ ಬದಲು ನಿಂಬೆ ರಸ ಮತ್...

ಜೋಳದಹಿಟ್ಟಿನಗಂಜಿ ಅಥವಾ ಅಂಬಲಿ

Image
ನಾನು ಮಾಡಿದ ವಿಧಾನ 1 ಬಟ್ಟಲು ಜೋಳದ ಹಿಟ್ಟನ್ನು ಸ್ವಲ್ಪ ಹುರಿದು ಇಟ್ಟು ಕೊಳ್ಳಬೇಕು ಹಾಗೂ ಸ್ವಲ್ಪ ಗಂಟಾಗದಂತೆ ಕಲಸಿ ಇಡಬೇಕು ಶುಂಠಿ ಬೆಳ್ಳುಳ್ಳಿ ಪೇಸ್ಟ್ 1ಚಮದಷ್ಟು ಖಾರಕ್ಕೆ ಬೇಕಾದಷ್ಟು ಹಸಿಮೆಣಸಿನಕಾಯಿ ಸ್ವಲ್ಪ ಕೊತ್ತುಂಬರಿ ಸೊಪ್ಪು ಸೇರಿಸಿ ಪೇಸ್ಟ್ ಮಾಡಬೇಕು. ಬಾಣಲೆಯಲಿ ಎಣ್ಣೆ ಕಾದ ನಂತರ ಕರಿಬೇವು ಸೊಪ್ಪು ಸ್ವಲ್ಪ ಜೀರಿಗೆ ಶುಂಠಿ ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಕೊತ್ತಂಬರಿ ಸೊಪ್ಪಿನ ಪೇಸ್ಟ್ ಹಾಕಿ ತಾಳಿಸಿ ಸುಮಾರು 5ಬಟ್ಟಲು ನೀರು ಹಾಕಿ ಕುದಿಯಲು ಇಡಬೇಕು , ನೀರು ಕುದಿಯುಲು ಬಂದಂತೆ ಇದಕ್ಕೆ ಕಲಸಿದ ಜೋಳದ ಹಿಟ್ಟು ಹಾಕಿ ಬಿಡದಂತೆ ಕೈಯಾಡಿಸುತಾ ಇರಬೇಕು, ಅಗತ್ಯ ಬಿದ್ದರೆ ಇನ್ನೂ ಸ್ವಲ್ಪ ನೀರು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಿ ಸ್ವಲ್ಪ ಹೊತ್ತು ಬೇಯಿಸಬೇಕು. ನಂತರ ತಾಜಾ ಮೊಸರಿನಿಂದ ಮಾಡಿದ 2 ಬಟ್ಟಲು ಮಜ್ಜೆಗೆ ಸೇರಿಸಿ ಕಲಸಿದರೆ ಗಂಜಿ ಅಥವಾ ಅಂಬಲಿ ತಯಾರು ಇದೆ ರೀತಿ ರಾಗಿ ,ಸಜ್ಜೆ ಹಿಟ್ಟಿನಲೂ ಮಾಡಬಹುದು

CHUTNEY POWDER ( Brahmin style)

Image
INGREDIENTS 1) Kadle bele 2 pavu 2) Udina bele 4/3 pavu( mukula pavu) 3) Bydagi ಮೆಣಸಿನ ಕಾಯಿ - 30 4) Gunturu ಮೆಣಸಿನಕಾಯಿ - 25 5) Hunse hannu dodda nembe hannu gatra 6) Bella swalpa 7) Gatti ingu swalpa 8) karibevu -10 esallu 9)kallu uppu ruchige 10) ಒಣ ಕೊಬ್ಬರಿ swalpa VAGARANGE OIL swalpa Sasive Pudi ingu swalpa Madavu vidana Modalige ಮೇಲಿನ yella ingredients separate agi oil ellade ( hakkabedi) sana uri yalli huridukolli ( bella, uppu biitu) yellavanu mix ge pudi ಮಾಡಿ ಕೊಂಡ mix ge bella uppu serisi nantra vagrane madikondu chutney powder ge mix Madi.... Arida mele tight airtight container haki idi... ಕನಿಷ್ಟ 4- 5 tingalu ida bahodu......

ಇಡ್ಲಿ, ಸಾಂಬಾರ್ ಚಟ್ನಿ

Image
ಇಡ್ಲಿಗೆ ಎರಡು ಗ್ಲಾಸ್ ಅಕ್ಕಿ ನೆನೆ ಹಾಕಿ ಅದಕ್ಕೆ ಮತ್ತೆ ಅರ್ಧಕ್ಕಿಂತನು ಸ್ವಲ್ಪ ಕಡಿಮೆ ಉದ್ದಿನಬೇಳೆ, ಒಂದು ಮೂರು ಟೀ ಸ್ಪೂನ್ ಮೆಂತ್ಯಕಾಳು ನೆನಸಿ ಇಡಿ ಅಕ್ಕಿ ಮತ್ತೆ ಉದ್ದಿನಬೇಳೆ ಎರಡು ಬೇರೆ ಬೇರೆ ಯಾಗಿಯೇ ನೆನೆ ಹಾಕಿ, ಬೆಳಿಗ್ಗೆ, 11 or 12 ಘಂಟೆಗೆ. ರಾತ್ರಿ ಎರಡನ್ನು ರುಬ್ಬಿಕೊಳ್ಳಿ ಬೇರೆ ಬೇರೆಯಾಗಿಯೇ ರುಬ್ಬಿ ಅಕ್ಕಿಯನ್ನು ಇಡ್ಲಿ ಮಾಡುವ ರವಾ ತರಾ ರುಬ್ಬಿ ಉದ್ದಿನಬೇಳೆ ಮೆಂತ್ಯ ಎರಡು ಕುಡಿಸಿ ಸಣ್ಣಗೆ ರುಬ್ಬಿ, ಹಾಗೆ ಸ್ವಲ್ಪ ಅವಲಕ್ಕಿ ಮತ್ತೆ ಒಂದು ಸ್ಪೂನ್ ಮಾಡಿದ ಅನ್ನ ಹಾಕಿ ರುಬ್ಬಿ ಚನ್ನಾಗಿ ಮಿಕ್ಸ್ madi ಎಲ್ಲಾಕುಡಿಸಿ, ಅದಕ್ಕೆ ಉಪ್ಪು ಅಡು ಗೆ ಸೋಡಾ ಹಾಕಿ ಚನ್ನಾಗಿ ಮಿಕ್ಸ್ ಮಾಡಿ ರಾತ್ರಿ ಪುರಾ ನೆನೆ ಇಡಿ, ಬೆಳ್ಳಿಗೆ ಇಡ್ಲಿ ಕುಕ್ಕರಗೆ ಹಾಕಿ ಇಡ್ಲಿ ಮಾಡಿ, ಚನ್ನಾಗಿ ಆಗುತ್ತೆ ಮತ್ತಗೆ ಇಡ್ಲಿಗಳು ಮಾಡಿ ನೋಡಿ ಫ್ರೆಂಡ್ಸ್. #ಇಡ್ಲಿ ಸಾಂಬಾರ್ ಸಿಂಪಲ್ ಆಗಿ ಮಾಡಿರೋದು ತೊಗರಿಬೇಳೆ, ಎರಡು ಈರುಳ್ಳಿ, ಎರಡು ಟೊಮ್ಯಾಟೋ, ಅರಶಿನ ಪುಡಿ, ಉಪ್ಪು ಎಲ್ಲಾ ಕುಕ್ಕರ್ಗೆ ಹಾಕಿ ಎರಡು ವಿಜಲ್ ಮಾಡಿ ಅದನ್ನು ಒಗ್ಗರಣೆ ಮಾಡಿ ಒಗ್ಗರಣೆಗೆ ಎರಡು ಸ್ಪೂನ್ ಎಣ್ಣೆ ಹಾಕಿ ಜೀರಿಗೆ ಸಾಸುವೆ, ಚಟಪಡಿಸಿ ಕರಿಬೇವು ಇಂಗು, ಕಾರದ ಪುಡಿ ಕೋತಂಬ್ರಿ ಸೊಪ್ಪು ಹಾಕಿ, ನಿಮಗೆ ಎಷ್ಟು ಬೇಕು ಅಷ್ಟು ನೀರು ಹಾಕಿ ಹಾಗೆ ಕುದಿಸಿಕೊಳ್ಳಿ ಇಡ್ಲಿ ಸಾಂಬಾರ್ ರಡಿ.

ಟೋಮೇಟೋ ಬಾತ್

Image
ಸುಲಭವಾಗಿ, ಬೇಗನೆ ಮಾಡಬಹುದಾದ ರೆಸಿಪಿ! ಎಲ್ಲರಿಗೂ ಇಷ್ಟವಾಗುವ ಆಹಾರ! ಒಬ್ಬೊಬ್ಬರದು ಒಂದೊಂದು ಶೈಲಿ! ಇದು ನಾನು ಮಾಡುವ ವಿಧಾನ! 5 ಟೋಮೇಟೋ, 1 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 1 ಚಿಕ್ಕ ಬಟ್ಟಲು ಬಟಾಣಿ ಬಿಡಿಸಿಡಿ. 1 ಚಿಕ್ಕ ಬೆಳ್ಳುಳ್ಳಿ, 1 ಇಂಚು ಶುಂಠಿ, 4 ಹಸಿ ಮೆಣಸಿನಕಾಯಿ, 4 ಚಮಚ ಕಾಯಿ ತುರಿ, 1 ಚಮಚ ಪುದೀನಾ, 1 ಚಮಚ ಕೊತ್ತಂಬರಿ ಸೊಪ್ಪು ರುಬ್ಬಿಡಿ. 1 ಲೋಟ ಅಕ್ಕಿ ತೊಳೆದು ನೀರು ಸೋರಿ ಹಾಕಿಡಿ. ಕುಕ್ಕರಿನಲ್ಲಿ 5 ಚಮಚ ಎಣ್ಣೆ ಹಾಕಿ, 1 ಇಂಚು ಚಕ್ಕೆ, 4 ಲವಂಗ, 2 ಏಲಕ್ಕಿ ಹಾಕಿ ಹುರಿದು, ಹೆಚ್ಚಿದ ಈರುಳ್ಳಿ, ಟೋಮೇಟೋ, ಬಟಾಣಿ, ರುಬ್ಬಿದ ಮಿಶ್ರಣ, ಉಪ್ಪು, ಅಕ್ಕಿ ಸೇರಿಸಿ ಸ್ವಲ್ಪ ಹುರಿದು 2 ಲೋಟ ನೀರು ಹಾಕಿ ಮುಚ್ಚಳ ಮುಚ್ಚಿ 1 ಅಥವಾ 2 ವಿಷಲ್ ಕೂಗಿಸಿ. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿದರೆ ರುಚಿಯಾದ ಟೋಮೇಟೋ ಬಾತ್ ಸಿದ್ಧ! ಇದೇ ರೆಸಿಪಿಯಲ್ಲಿ ಸಾಧಾರಣ ಅಕ್ಕಿಯ ಬದಲು ಬಾಸುಮತಿ ಅಕ್ಕಿ ಹಾಕಿದರೆ ಟೋಮೇಟೋ ಪಲಾವ್ ರೆಡಿ! ನಿಮಗೆ ಇಷ್ಟವಾಗುವ ರೀತಿಯಲ್ಲಿ ಮಾಡಿಕೊಳ್ಳಿ.