ಅವಲಕ್ಕಿ ಮಿಲ್ಕ್ ಶೇಕ್

ಹೊಸ ರುಚಿ,ಹೊಸ ತರಹದ ಅವಲಕ್ಕಿ ಮಿಲ್ಕ್ ಶೇಕ್
ನೀವು ಫ್ರೂಟ್ಸ್,ವೆಜಿಟೇಬಲ್ ಮಿಲ್ಕ್ ಶೇಕ್ ಮಾಡಿರ್ತಿರಿ
ಆದರೆ ಅವಲಕ್ಕಿ ಮಿಲ್ಕ್ ಶೇಕ್ ಮಾಡಿದ್ದೀರಾ. ಇಲ್ಲಿದೆ ನೋಡಿ ಅವಲಕ್ಕಿ ಮಿಲ್ಕ್ ಶೇಕ್. ಇದು ಆರೋಗ್ಯಕ್ಕೆ ತುಂಬಾ ಒಳ್ಳೆದು.

೧.ಪೇಪರ್ ಅವಲಕ್ಕಿ 1ಕಪ್
೨.ಹಾಲು 2ಕಪ್
೩.ಸಕ್ಕರೆ 8ಸ್ಪೂನ್
೪.ಗೋಡಂಬಿ
೫.ಬಾದಾಮಿ
೬.ಎಲಕ್ಕಿ
ಮಾಡುವ ವಿಧಾನ
1.ಅವಲಕ್ಕಿ ನೀರು ಹಾಕಿ ತೊಳೆದು ನೀರು ತೆಗೆದು.ಸಕ್ಕರೆ ಬಾದಾಮಿ,ಗೋಡಂಬಿ ಹಾಕಿ ನುಣ್ಣಗೆ ರುಬ್ಬಿ.
2.ರುಬ್ಬುವಾಗ ಹಾಲು ಬೇಕಾದರೆ ಹಾಕಿ ರುಬ್ಬಿ.ನಂತರ ಒಂದು ಪಾತ್ರೆಗೆ ತೆಗೆದು ಬೇಕಾದಷ್ಟು ಹಾಲು ಎಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ ಸರ್ವ್ ಮಾಡಿ.
3.ಇದಕ್ಕೆ ಸಕ್ಕರೆ ಬೇಡಾ ಅಂದರೆ ಬೆಲ್ಲ ಹಾಕಬಹುದು.ಎಲಕ್ಕಿ ಬದಲಿಗೆ ವೆನಿಲ್ಲಾ ಎಸೆನ್ಸ್ ಹಾಕಬಹುದು.ಮಕ್ಕಳು ಸೂಪರ್ ರೋ ಸೂಪರ್ ಅಂತ ಕುಡಿತಾರೆ.


Comments

Popular posts from this blog

ಇದು ಆಳ್ವಿ.ಬಾಣಂತಿಯರಿಗೆ ಕೊಡ್ತಾರೆ ಮತ್ತು ಮೈ ಕೈ ನೋವಿಗೆ ಇದು ರಾಮಬಾಣ ಇದ್ದಂಗೆ.

ಬೆಲ್ಲದ ಸಿಹಿ ಕರದಂಟು

CHUTNEY POWDER ( Brahmin style)