ಮೋಹನ್ ತಾಲ್
ಬೇಕಾಗುವ ಸಾಮಗ್ರಿಗಳು
ಸಕ್ಕರೆ ಎರಡು ಬಟ್ಟಲು
ಕಡಲೆಹಿಟ್ಟು ಒಂದುಕಪ್
ಮಿಲ್ಕ್ ಪೌಡರ್ ಒಂದು ಕಪ್
ರೀಫೈಂಡ್ ಆಯಿಲ್ ಒಂದು ಕಪ್
ತುಪ್ಪ ಒಂದು ಕಪ್
ಬಾದಾಮಿ, ಗೋಡಂಬಿ ಮಿಕ್ಸಿಯಲ್ಲಿ ಹಾಕಿ ಸಣ್ಣಗೆ ಮಾಡಿಕೊಳ್ಳಿ ಮಾಡುವ ವಿಧಾನ
ಸಕ್ಕರೆಗೆ ಒಂದು ಕಪ್ ನೀರುಹಾಕಿ ಪಾಕ ಮಾಡಿಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ರೀಫೈಂಡ್ ಆಯಿಲ್, ಕಡಲೆ ಹಿಟ್ಟು, ಮಿಲ್ಕ್ ಪೌಡರ್ ಹಾಕಿ ಚೆನ್ನಾಗಿ ಕಲಸಿ. ನಂತರ ಸಕ್ಕರೆ ಪಾಕ ನೊರೆ ಬರುತ್ತಿದ್ದಂತೆ ಈ ಮಿಶ್ರಣವನ್ನು ಹಾಕಿ ಚೆನ್ನಾಗಿ ತಳ ಹಿಡಿಯದಂತೆ ತಿರುಗಿಸಿ. ನಂತರ ತುಪ್ಪ ಹಾಗೂ ಗೋಡಂಬಿ ಹಾಕಿ ಕಲಸಿ. ತಳ ಬಿಟ್ಟ ನಂತರ ತುಪ್ಪ ಜಿನುಗಿ ಬರಲಾರಂಭಿಸುತ್ತಿದ್ದಂತೆ ಕೆಳಗಿಳಿಸಿ. ಮೊದಲೇ ತಟ್ಟೆ ಯೊಂದಕ್ಕೆ ತುಪ್ಪ ಸವರಿ ಇಟ್ಟಿರುವ. ಇದನ್ನು ಆ ತಟ್ಟೆಗೆ ಹಾಕಿ ಬೇಕಾದ ಆಕಾರದಲ್ಲಿ ಕತ್ತರಿಸಿದರೆ ಮೋಹನ್ ತಾಲ್ ರೆಡಿ.
ಅಲಂಕಾರಕ್ಕೆ ಗೋಡಂಬಿ, ದ್ರಾಕ್ಷಿ ಹಾಕಿ.

Comments
Post a Comment