ಆಲೂ ಪರೋಟ...

#ಬೇಕಾಗುವ_ಸಾಮಗ್ರಿಗಳು :
#ಕಣಕಕ್ಕೆ:
ಗೋಧಿ ಹಿಟ್ಟು:10 ಪರೋಟ ಆಗೋ ಅಷ್ಟು.
ಉಪ್ಪು:ರುಚಿಗೆ ತಕ್ಕಷ್ಟು
ಎಣ್ಣೆ: 10ಚಮಚ

#ಹೂರಣಕ್ಕೆ:
ಬೇಯಿಸಿದ ಆಲೂ:5
ಹಸಿ ಮೆಣಸಿನ ಕಾಯಿ:ಖಾರಕ್ಕೆ ತಕ್ಕಷ್ಟು(ನಾನು 8 ಬಳಸಿದ್ದೇನೆ)
ಶುಂಠಿ : ಒಂದು ಇಂಚು
ಬೆಳ್ಳುಳ್ಳಿ: 3ಬೇಳೆ (optional)
ಕೊತ್ತಂಬರಿ ಸೊಪ್ಪು(ಸಣ್ಣ ಹಿಡಿ)
ಉಪ್ಪು,ಅರಿಶಿಣ, ಎಣ್ಣೆ,ಜೀರಿಗೆ .
#ವಿಧಾನ:
ಮೊದಲು ಗೋಧಿಹಿಟ್ಟಿಗೆ ಉಪ್ಪು ಹಾಗೂ 10ಚಮಚ ಎಣ್ಣೆ ಹಾಕಿ ಮೃದುವಾಗಿ ಕಲೆಸಿ ನಂತರ ನೀರು ಹಾಕಿ ಕಲೆಸಿಟ್ಟು ಮೇಲೆ ಒಂದು ಚಮಚ ಎಣ್ಣೆ ಹಾಕಿ ನೆನೆಯಲು ಬಿಡಿ.
ಬೇಯಿಸಿದ ಆಲೂವನ್ನು ತುರಿದಿಟ್ಟು ಕೊಳ್ಳಿ.
ಮಿಕ್ಸಿಲಿ ಮೆಣಸಿನಕಾಯಿ,ಕೊತ್ತಂಬರಿ ಸೊಪ್ಪು,ಶುಂಠಿ,ಬೆಳ್ಳುಳ್ಳಿ ಸ್ವಲ್ಪ ಉಪ್ಪು ಹಾಕಿ ಗ್ರೈಂಡ್ ಮಾಡಿಟ್ಟುಕೊಳ್ಳಿ.
ಒಂದು ಕಡಾಯಿಯಲ್ಲಿ 2ಚಮಚ ಎಣ್ಣೆ,ಜೀರಿಗೆ (ಅಥವಾ ಜಿರಾ ಪುಡಿ) ,ಅರಿಶಿನ ಹಾಕಿ ಗ್ರೈಂಡ್ ಮಾಡಿದ್ದನ್ನು ಹಾಕಿ ಖಾರದ ಹಸಕು ವಾಸನೆ ಹೋಗೋವರೆಗೂ ಕೈಯಾಡಿ....ಇದಕ್ಕೆ ಉಪ್ಪು ಹಾಕಿ,ತುರಿದ ಆಲೂ ಹಾಕಿ ಚನ್ನಾಗಿ ಮಿಕ್ಸ್ ಮಾಡಿ ಆರಲು ಬಿಡಿ.
ನಂತರ ಒಂದು ಚಪಾತಿಗೆ ಬೇಕಾಗುವದಕ್ಕಿಂತ ಸ್ವಲ್ಪ ಕಮ್ಮಿ ಪ್ರಮಾಣದ ಕಣಕವನ್ನು ತೆಗೆದುಕೊಂಡು ಅದರಮೇಲೆ ಒಂದು ನಿಂಬೇ ಗಾತ್ರ(ಬೇಕಾದರೆ ಸ್ವಲ್ಪ ಜಾಸ್ತಿ )ಹೂರಣವನ್ನು ಇಟ್ಟು ಮಡಚಿ ಲಟ್ಟಿಸಿ,ಬೇಯಿಸಿ....
ಬೇಯಿಸಲು ಎಣ್ಣೆ ಬೇಕಾದರೂ ಬಳಸ ಬಹುದು.... ಅಥವಾ ಅಮುಲ್ ಬೆಣ್ಣೆ ಕೂಡ ಬಳಸ ಬಹುದು.
ಬಿಸಿ ಬಿಸಿ ಆಲೂ ಪರೋಟವನ್ನು ತುಪ್ಪ,ಕೆಚಪ್,ಉಪ್ಪಿನಕಾಯಿ ಮೊಸರು ಅಥವಾ ಚಟ್ನಿಯೊಂದಿಗೆ ತಿನ್ನಬಹುದು...(ನಾನು ಏನೂ ನೆಂಚಿಕೊಳ್ಳದೇ ತಿನ್ನುತ್ತೇನೆ).
ಮಾಡಿ ನೋಡಿ.ಅಭಿಪ್ರಾಯ ತಿಳಿಸಿ.












Comments

Popular posts from this blog

ಇದು ಆಳ್ವಿ.ಬಾಣಂತಿಯರಿಗೆ ಕೊಡ್ತಾರೆ ಮತ್ತು ಮೈ ಕೈ ನೋವಿಗೆ ಇದು ರಾಮಬಾಣ ಇದ್ದಂಗೆ.

ಬೆಲ್ಲದ ಸಿಹಿ ಕರದಂಟು

CHUTNEY POWDER ( Brahmin style)