ಟೋಮೇಟೋ ಬಾತ್

ಸುಲಭವಾಗಿ, ಬೇಗನೆ ಮಾಡಬಹುದಾದ ರೆಸಿಪಿ! ಎಲ್ಲರಿಗೂ ಇಷ್ಟವಾಗುವ ಆಹಾರ! ಒಬ್ಬೊಬ್ಬರದು ಒಂದೊಂದು ಶೈಲಿ! ಇದು ನಾನು ಮಾಡುವ ವಿಧಾನ!
5 ಟೋಮೇಟೋ, 1 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 1 ಚಿಕ್ಕ ಬಟ್ಟಲು ಬಟಾಣಿ ಬಿಡಿಸಿಡಿ.
1 ಚಿಕ್ಕ ಬೆಳ್ಳುಳ್ಳಿ, 1 ಇಂಚು ಶುಂಠಿ, 4 ಹಸಿ ಮೆಣಸಿನಕಾಯಿ, 4 ಚಮಚ ಕಾಯಿ ತುರಿ, 1 ಚಮಚ ಪುದೀನಾ, 1 ಚಮಚ ಕೊತ್ತಂಬರಿ ಸೊಪ್ಪು ರುಬ್ಬಿಡಿ.
1 ಲೋಟ ಅಕ್ಕಿ ತೊಳೆದು ನೀರು ಸೋರಿ ಹಾಕಿಡಿ.
ಕುಕ್ಕರಿನಲ್ಲಿ 5 ಚಮಚ ಎಣ್ಣೆ ಹಾಕಿ, 1 ಇಂಚು ಚಕ್ಕೆ, 4 ಲವಂಗ, 2 ಏಲಕ್ಕಿ ಹಾಕಿ ಹುರಿದು, ಹೆಚ್ಚಿದ ಈರುಳ್ಳಿ, ಟೋಮೇಟೋ, ಬಟಾಣಿ, ರುಬ್ಬಿದ ಮಿಶ್ರಣ, ಉಪ್ಪು, ಅಕ್ಕಿ ಸೇರಿಸಿ ಸ್ವಲ್ಪ ಹುರಿದು 2 ಲೋಟ ನೀರು ಹಾಕಿ ಮುಚ್ಚಳ ಮುಚ್ಚಿ 1 ಅಥವಾ 2 ವಿಷಲ್ ಕೂಗಿಸಿ.
ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿದರೆ ರುಚಿಯಾದ ಟೋಮೇಟೋ ಬಾತ್ ಸಿದ್ಧ!
ಇದೇ ರೆಸಿಪಿಯಲ್ಲಿ ಸಾಧಾರಣ ಅಕ್ಕಿಯ ಬದಲು ಬಾಸುಮತಿ ಅಕ್ಕಿ ಹಾಕಿದರೆ ಟೋಮೇಟೋ ಪಲಾವ್ ರೆಡಿ!
ನಿಮಗೆ ಇಷ್ಟವಾಗುವ ರೀತಿಯಲ್ಲಿ ಮಾಡಿಕೊಳ್ಳಿ.


Comments

Popular posts from this blog

ಇದು ಆಳ್ವಿ.ಬಾಣಂತಿಯರಿಗೆ ಕೊಡ್ತಾರೆ ಮತ್ತು ಮೈ ಕೈ ನೋವಿಗೆ ಇದು ರಾಮಬಾಣ ಇದ್ದಂಗೆ.

ಬೆಲ್ಲದ ಸಿಹಿ ಕರದಂಟು

CHUTNEY POWDER ( Brahmin style)