ಮಿಂಟ್ ಬಿಸ್ಕೇಟ್್ಸ Mint biscuits
ಪ್ರೀತಿಯ ಅಡಿಗೆ ಅರಮನೆಯ ಅರಸ ಮತ್ತು
ಅರಸಿಯರಿಗೆ, ಇನ್ನೂ ಚಳಿ ಮುಂದುವರೆದ ಕಾರಣ
ನಿಮಗೆಲ್ಲಾ ನನ್ನ ಇನ್ನೊಂದು ರೆಸಿಪಿ. ಮಿಂಟ್ ಬಿಸ್ಕೇಟ್ಸಗೆ ನನ್ನ ಮಕ್ಕಳು "ಚಸ್ಕಾ ಮಸ್ಕಾ" ಅಂತಾ ಕರಿತಾರೆ.
ಮಾಡುವ ವಿಧಾನ:
*ಒಂದು ಬಟ್ಟಲು ಅಕ್ಕಿಹಿಟ್ಟು,
*ಒಂದು ಬಟ್ಟಲು ಮೈದಾ
* ಎರಡು ಸ್ಪೂನ್ ಚಿರೋಟಿ ರವಾ,
* ಒಂದು ಬಟ್ಟಲು ತೊಳೆದು ಸಣ್ಣಗೆ ಕಟ್ ಮಾಡಿದ
ಪುದಿನ( mint leaves), ಸ್ವಲ್ಪ ತರಿಮಾಡಿದ ಜೀರಿಗೆ, ಓಂ ಕಾಳು, ರುಚಿಗೆ ತಕ್ಕಂತೆ ಉಪ್ಪು ಮತ್ತು
ಕಾಳು ಮೆಣಸಿನ ಪುಡಿ, ಸ್ವಲ್ಪ ಎಳ್ಳು ಮತ್ತು ಕರಿಯಲು ಎಣ್ಣೆ.

ಮೇಲೆ ತಿಳಿಸಿರುವ ಎಲ್ಲವನ್ನೂ(ಯಾವುದನ್ನೂ
ಹುರಿಯುವುದು ಬೇಡ) ಒಂದು ಅಗಲವಾದ ಪರಾತಕ್ಕೆ ಹಾಕಿ ಸ್ವಲ್ಪ (3 spoon) ಕಾದ ಎಣ್ಣೆ ಹಾಕಿ
ನೀರನ್ನು ಸೇರಿಸಿ ಪೂರಿಹಿಟ್ಟಿನ ಹದಕ್ಕೆ ಕಲೆಸಿ.ನಂತರ ಸ್ವಲ್ಪ ಮೈದಾಪುಡಿಯನ್ನು ಉದುರಿಸಿಕೊಂಡು ಚಪಾತಿಯಂತೆ ಲಟ್ಟಿಸಿ ಬೇಕಾದ ಆಕಾರಕ್ಕೆ ಕತ್ತರಿಸಿ ಕಾದ ಎಣ್ಣೆಗೆ ಹಾಕಿ ಕೆಂಬಣ್ಣ ಬರುವ ತನಕ ಕರಿದು ತೆಗೆಯಿರಿ. ರುಚಿಕರವಾದ ಮಿಂಟ್ ಬಿಸ್ಕತ್ತುಗಳು ರೆಡಿ.
ಏನು? ಡಯಟ್ ಫಾಲೊ ಮಾಡ್ತೀರಾ!!!
ಚಿಂತಿಸಬೇಡಿ ಇದು ಜಾಸ್ತಿ ಎಣ್ಣೆ ಹೀರುವುದಿಲ್ಲ.
ಒಂದ್ನಾಲ್ಕು ಜಮಾಯ್ಸಿ. ಮಾಡಿ ತಿಂದು ಹೇಳಿ.
ಖಂಡಿತ ಎಲ್ಲರಿಗೂ ಇಷ್ಟವಾಗುತ್ತೆ. ಮಾಡುವುದು
ಕೂಡ ಸುಲಭ.

Comments
Post a Comment