ಇದು ಆಳ್ವಿ.ಬಾಣಂತಿಯರಿಗೆ ಕೊಡ್ತಾರೆ ಮತ್ತು ಮೈ ಕೈ ನೋವಿಗೆ ಇದು ರಾಮಬಾಣ ಇದ್ದಂಗೆ.
ಇದು ಆಳ್ವಿ.ಬಾಣಂತಿಯರಿಗೆ ಕೊಡ್ತಾರೆ ಮತ್ತು ಮೈ ಕೈ ನೋವಿಗೆ ಇದು ರಾಮಬಾಣ ಇದ್ದಂಗೆ. ಇದನ್ನು ತಗೆದುಕೊಳ್ಳೊಕೆ ವಯಸ್ಸಿನ ಮಿತಿ ಇಲ್ಲ. ಚಳಿಗಾಲಕ್ಕಂತೂ ತುಂಬಾ ಒಳ್ಳೆಯದು. ಆಳ್ವಿ ಸಂಗಟಿನೂ ಅಂತಾರೆ ಇದಕ್ಕೆ. ಇದರಿಂದ ಉಂಡೆನೂ ಮಾಡ್ತಿವಿ. ನಾನು ಮಾಡಿದ ರೀತಿ ನಿಮಗೆ ತಿಳಿಸಿ ಕೊಡ್ತೆನೆ. ಮಾಡೋಕೆ ಮುಂಚೆ ೨-೩ ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಬೇಕು. ನೆನೆದ ನಂತರ ಇದು ದ್ರಾಕ್ಷಿ ಬೀಜ ಅಥವಾ ಕಾಮಕಸ್ತೂರಿ ಬೀಜ ತರಹ ಕಾಣಿಸುತ್ತೆ. ಮಾಡಲು ಜಾಸ್ತಿ ಸಾಮಗ್ರಿಗಳು ಏನು ಬೇಕಾಗಿಲ್ಲ. ಆಳ್ವಿ ೧/೨ ಕಪ್ ಬೆಲ್ಲ ೨ ಗೋಲಿ ಗಾತ್ರ ನೀರು ೧ ಕಪ್ ಹಾಲು ನಿಮಗೆ ಬೇಕೆನಿಸಿದರೆ ೧/೨ ಕಪ್ ಹಾಕಿಕೊಳ್ಳಿ. ಪಾತ್ರೆಯಲ್ಲಿ ನೀರು ಹಾಕಿ ಕುದಿ ಬಂದ ನಂತರ ಬೆಲ್ಲ ಹಾಕಿ.ಬೆಲ್ಲ ಕರಗಿದ ನಂತರ ಅದನ್ನು ಸೋಸಿಕೊಳ್ಳಿ .ಸೋಸಿಕೊಂಡ ಬೆಲ್ಲದ ನೀರಿಗೆ ನೆನೆಸಿಟ್ಟು ಕೊಂಡಿರುವ ಆಳ್ವಿಯನ್ನು ನೀರು ಸಮೇತ ಹಾಕಿ ೩ ನಿಮಿಷ ಕುದಿಸಿ ಕೆಳಗಿಳಿಸಿ . ಗ್ಲಾಸ್ ಅಥವಾ ಕಪ್ ಗೆ ಹಾಕಿ ಕುಡಿಯಲು ಕುಡಿ. ನಾನಿಲ್ಲಿ ಹಾಲು ಹಾಕಿದ್ದೆನೆ ಕಾಯಿಸಿ ತಣ್ಣಗೆ ಇರೋದು.

Comments
Post a Comment