ಪಾಲಕ ಪತ್ರೊಡೆ

ಬೇಕಾಗುವ ಸಾಮಾನು
ತಾಜಾ ದೊಡ್ಡ ಅಳತೆಯ ಪಾಲಕ ಎಲೆಗಳು _ 12
ಕಡಲೇಹಿಟ್ಟು 1 ಕಪ್
ಹುಣಿಸೇಹಣ್ಣುಕಿವಿಚಿ ರಸ_ 1/4 ಕಪ್
ಬೆಲ್ಲ _1 ಟೀ ಚಮಚ
ಖಾರಪುಡಿ _1/2 ಟೀ ಚಮಚ
ಜೇರಿಗೆ ಪುಡಿ_ 1/4ಟೀ ಚಮಚ
ಇಂಗು _1/4ಟೀ ಚಮಚ
ಅರಿಶಿನ ಪುಡಿ_1/4ಟೀ ಚಮಚ.

ಮಾಡುವ ವಿಧಾನ;
ಒಂದು ಅಗಲವಾದ ಸ್ಟೀಲ ಬುಟ್ಟಿಯಲ್ಲಿ (ಬೇಸನಬುಟ್ಟಿಯಲ್ಲಿ) ಮೇಲೆ ಹೇಳಿದ
ಕಡಲೆ ಹಿಟ್ಟು ,ಖಾರ ಪುಡಿ ಜೀರಿಗೆ ಪುಡಿ , ಬೆಲ್ಲ, ಅರಿಶಿಣ ಪುಡಿ, ಹುಣಸೆ ಹಣ್ಣಿನ ರಸ, ರುಚಿಗೆ ತಕ್ಕ ಉಪ್ಪು ಇಂಗು ಸ್ವಲ್ಪ ನೀರು ಎಲ್ಲ ಹಾಕಿ ಚೆನ್ನಾಗಿ ಮಿಶ್ರ ಮಾಡಿ ಹಚ್ಚುವ ಹಿಟ್ಟನ್ನು ತಯಾರು ಮಾಡಿರಿ .
ಹಿಟ್ಟಿಗೆ ಅಂಟಂಟಾಗಿ ಹರಡುವ ಸಾಂದ್ರತೆ ಇರಬೇಕು.
ನಂತರ ಪಾಲಕ ಎಲೆಗಳನ್ನು ಹರಡಿಕೊಂಡು ಒಂದೊಂದಾಗಿ ಎಲೆಯ ಹಿಂಬದಿಯ ಮೇಲೆ ಹಿಟ್ಟನ್ನು ತೆಳ್ಳಗೆ ಹಚ್ಚಿ .ಅದರಮೇಲೆ ಇನ್ನೊಂದು ಎಲೆ ಇಟ್ಟು ಮತ್ತೆ ಮೇಲೆ ಹಿಟ್ಟು ಹಚ್ಚಿ.
ಹೀಗೆ ಎರಡು ಅಥವಾ ಮೂರು ಎಲೆಗಳನ್ನು ಸುರುಳಿ ಸುತ್ತಿದ ಹಾಗೆ ಸುತ್ತಿ.
ನಂತರ ಅವುಗಳನ್ನು ಅಗಲ ಪ್ಲೇಟ್ ನಲ್ಲಿ ಇಟ್ಟು ಕುಕ್ಕರಿನಲ್ಲಿ ವಿಶಲ್ ಇಲ್ಲದೇ ಇಡ್ಲಿಯಂತೆ ಹಬೆಯಲ್ಲಿ ಬೇಯಿಸಿ.
ಆಮೇಲೆ ಹೊರಗೆ ತೆಗೆದು ಸ್ವಲ್ಪ ಆರಿದಮೇಲೆ ಅರ್ಧ ಇಂಚು ಉದ್ದದ ತುಂಡುಗಳಾಗಿ ಕತ್ತರಿಸಿ. ಈ ತುಂಡುಗಳನ್ನು ಸ್ವಲ್ಪ ವಗ್ಗರಣೆಯಲ್ಲಿ ಹುರಿದು (shallow fry )
Or
ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಕರಿದು (Deep fry )
ನಂತರ ಸ್ವಲ್ಪ ಬಿಸಿಇದ್ದಾಗಲೇ
ಅವುಗಳ ಮೇಲೆ ಕೊತ್ತಂಬರಿಸೊಪ್ಪು, ಹುರಿದ ಎಳ್ಳು ಉದುರಿಸಿ.
.ಬೇಕಾದರೆ ಸ್ವಲ್ಪ ತುಪ್ಪ ಅಥವಾ ಬೆಣ್ಣೆ ಮೇಲೆ ಹಾಕಬಹುದು.
ಈಗ ತಯಾರಾದ ಪಾಲಕ ಪತ್ರೊಡೆಯನ್ನು
ಕೊಬ್ಬರಿಚಟ್ನಿ ಅಥವಾ ಟೊಮೆಟೊ ಸಾಸ್ ಜೊತೆ ತಿನ್ನಬಹುದು. ರುಚಿಕರವಾಗಿರುತ್ತದೆ.
ಸೂಚನೆ *_ ಮೇಲಿನ ಅಳತೆಯಂತೆ ಮಾಡಿದರೆ 12 ಎಲೆಗಳಿಂದ ಸಾಧಾರಣವಾಗಿ
15 ಪತ್ರೊಡೆ ಮಾಡಬಹುದು.





Comments

Popular posts from this blog

ಇದು ಆಳ್ವಿ.ಬಾಣಂತಿಯರಿಗೆ ಕೊಡ್ತಾರೆ ಮತ್ತು ಮೈ ಕೈ ನೋವಿಗೆ ಇದು ರಾಮಬಾಣ ಇದ್ದಂಗೆ.

ಬೆಲ್ಲದ ಸಿಹಿ ಕರದಂಟು

CHUTNEY POWDER ( Brahmin style)