Posts

ಬೆಲ್ಲದ ಸಿಹಿ ಕರದಂಟು

Image
ಬೇಕಾಗುವ ಸಾಮಾನು ಹುರಿಗಡಲೆ ಹಿಟ್ಟು ಅಥವಾ ಪುಟಾಣಿ ಹಿಟ್ಟು 3 ಲೋಟ ಪುಡಿ ಮಾಡಿದ ಬೆಲ್ಲ 2 1/2 ಲೋಟ ಗಸಗಸೆ ಸ್ವಲ್ಪ ಒಣ ಕೊಬ್ಬರಿ ತುರಿ ಸ್ವಲ್ಪ ತುಪ್ಪ 4 ಚಮಚ ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ಬೆಲ್ಲದಪುಡಿ ಹಾಕಿ ಸ್ವಲ್ಪ ನೀರು ಹಾಕಿ ಸಣ್ಣ ಉರಿಯಲ್ಲಿ ಬೆಲ್ಲ ಕರಗಿಸಿ ಒಂದೆಳೆ ಪಾಕ ತಯಾರಸಿ ನಂತರ gas off ಮಾಡಿ ತುಪ್ಪ ಹಾಕಿ ಸೌಟಾಡಿಸಿ ಆಮೆಲೇ ಹುರಿಗಡಲೆ ಹಿಟ್ಟು ಹಾಕಿ ಚನ್ನಾಗಿ ಸೌಟಾಡಿಸಿ ಒಂದು ತುಪ್ಪ ಸವರಿದ ತಟ್ಟೆಗೆ ಹಾಕಿ ಮೇಲೆ ಒಣ ಕೊಬ್ಬರಿ ತುರಿ ಮತ್ತು ಗಸಗಸೆ ಉದುರಿಸಿ ಸ್ವಲ್ಪ ಆರಿದ ನಂತರ ಬೇಕಾದ ಆಕಾರಕ್ಕೆ ಕಟ್ ಮಾಡಿದರೆ ಕರದಂಟು ಸಿದ್ದವಾಗುತ್ತದೆ.

ಆಲೂ ಪರೋಟ...

Image
# ಬೇಕಾಗುವ_ಸಾಮಗ್ರಿಗಳು : # ಕಣಕಕ್ಕೆ : ಗೋಧಿ ಹಿಟ್ಟು:10 ಪರೋಟ ಆಗೋ ಅಷ್ಟು. ಉಪ್ಪು:ರುಚಿಗೆ ತಕ್ಕಷ್ಟು ಎಣ್ಣೆ: 10ಚಮಚ # ಹೂರಣಕ್ಕೆ : ಬೇಯಿಸಿದ ಆಲೂ:5 ಹಸಿ ಮೆಣಸಿನ ಕಾಯಿ:ಖಾರಕ್ಕೆ ತಕ್ಕಷ್ಟು(ನಾನು 8 ಬಳಸಿದ್ದೇನೆ) ಶುಂಠಿ : ಒಂದು ಇಂಚು ಬೆಳ್ಳುಳ್ಳಿ: 3ಬೇಳೆ (optional) ಕೊತ್ತಂಬರಿ ಸೊಪ್ಪು(ಸಣ್ಣ ಹಿಡಿ) ಉಪ್ಪು,ಅರಿಶಿಣ, ಎಣ್ಣೆ,ಜೀರಿಗೆ . # ವಿಧಾನ : ಮೊದಲು ಗೋಧಿಹಿಟ್ಟಿಗೆ ಉಪ್ಪು ಹಾಗೂ 10ಚಮಚ ಎಣ್ಣೆ ಹಾಕಿ ಮೃದುವಾಗಿ ಕಲೆಸಿ ನಂತರ ನೀರು ಹಾಕಿ ಕಲೆಸಿಟ್ಟು ಮೇಲೆ ಒಂದು ಚಮಚ ಎಣ್ಣೆ ಹಾಕಿ ನೆನೆಯಲು ಬಿಡಿ. ಬೇಯಿಸಿದ ಆಲೂವನ್ನು ತುರಿದಿಟ್ಟು ಕೊಳ್ಳಿ. ಮಿಕ್ಸಿಲಿ ಮೆಣಸಿನಕಾಯಿ,ಕೊತ್ತಂಬರಿ ಸೊಪ್ಪು,ಶುಂಠಿ,ಬೆಳ್ಳುಳ್ಳಿ ಸ್ವಲ್ಪ ಉಪ್ಪು ಹಾಕಿ ಗ್ರೈಂಡ್ ಮಾಡಿಟ್ಟುಕೊಳ್ಳಿ. ಒಂದು ಕಡಾಯಿಯಲ್ಲಿ 2ಚಮಚ ಎಣ್ಣೆ,ಜೀರಿಗೆ (ಅಥವಾ ಜಿರಾ ಪುಡಿ) ,ಅರಿಶಿನ ಹಾಕಿ ಗ್ರೈಂಡ್ ಮಾಡಿದ್ದನ್ನು ಹಾಕಿ ಖಾರದ ಹಸಕು ವಾಸನೆ ಹೋಗೋವರೆಗೂ ಕೈಯಾಡಿ....ಇದಕ್ಕೆ ಉಪ್ಪು ಹಾಕಿ,ತುರಿದ ಆಲೂ ಹಾಕಿ ಚನ್ನಾಗಿ ಮಿಕ್ಸ್ ಮಾಡಿ ಆರಲು ಬಿಡಿ. ನಂತರ ಒಂದು ಚಪಾತಿಗೆ ಬೇಕಾಗುವದಕ್ಕಿಂತ ಸ್ವಲ್ಪ ಕಮ್ಮಿ ಪ್ರಮಾಣದ ಕಣಕವನ್ನು ತೆಗೆದುಕೊಂಡು ಅದರಮೇಲೆ ಒಂದು ನಿಂಬೇ ಗಾತ್ರ(ಬೇಕಾದರೆ ಸ್ವಲ್ಪ ಜಾಸ್ತಿ )ಹೂರಣವನ್ನು ಇಟ್ಟು ಮಡಚಿ ಲಟ್ಟಿಸಿ,ಬೇಯಿಸಿ.... ಬೇಯಿಸಲು ಎಣ್ಣೆ ಬೇಕಾದರೂ ಬಳಸ ಬಹುದು.... ಅಥವಾ ಅಮುಲ್ ಬೆಣ್ಣೆ ಕೂಡ ಬಳಸ ಬಹುದು.

ಬದನೆಕಾಯಿ ರಸದ ಎಣ್ಣೆ ಮಸಾಲೆ.

Image
ಈರುಳ್ಳಿ.. ಬದನೆಕಾಯಿ ಕುಕ್ಕರ್ ನಲ್ಲಿ ಕುದಿಸಿ ನಂತರ ಕುದಿಸಿದ ಬದನೆಕಾಯಿ ..ಹಸಿ ಮೆಣಸಿನಕಾಯಿ.. ಕರಿಮೆಣಸು.. ಎಳ್ಳು.. ಒಣಕೊಬ್ಬರಿಪುಡಿ.. ಉಪ್ಪು.. ಹುಣಸೆ ರಸ.. ಜೀರಿಗೆ ಮೊಸರು ಚಕ್ಕೆ.. ಮಸಾಲೆ ಎಲೆ ಹಸಿ ಕೊಬ್ಬರಿ ತುರಿ ಈ ಎಲ್ಲ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ .. ನಂತರ ಕುಕ್ಕರ್ ನ ಪ್ಯಾನಲ್ಲಿ ಎಣ್ಣೆ ವಗ್ಗರಣೆಹಾಕಿ ಉದ್ದಿನಬೇಳೆ ಕಡ್ಲೆಬೇಳೆ ಸಾಸವೆ ಕರಿಬೇವು ಒಣಮೆಣಸಿನಕಾಯಿ ತುಂಡು ಹಾಕಿ ಬಾಡಿಸಿ ನಂತರ ಬಿಸಿ ನೀರು ಹಾಕಿ ರುಬ್ಬಿದ ಬದನೆಕಾಯಿ ಕಾರ ಮಿಶ್ರಣ ಸೇರಿಸಿ ನಂತರ ಕುದಿಸಿದ ಈರುಳ್ಳಿಯನ್ನು ಹಾಕಿ ಒಂದು ವಿಶಲ್ ಕೂಗಿಸಿ ಚೆನ್ನಾಗಿ ಕಾಸಿದ ಹಿಂಗು ಮಿಶ್ರಿತ ಎಣ್ಣೆ ಹಾಕಿ ಒಳ್ಳೆಯ ಕಾರದ ಎಣ್ಣೆ ಬದನೆಕಾಯಿ ಮಸಾಲೆ ರೆಡಿ ಇದು ಮೃದುವಾದ ಪಲ್ಯ ಖಡಕ ರೊಟ್ಟಿ ಗೆ ಓಕೆ ಏಗನೂರು ಟೆಂಪಲ ಹೇಮಶೈಲೇಂದ್ರ

ಟೊಮ್ಯಾಟೋ ಗೊಜ್ಜು

Image
ಎರಡು ಟೊಮ್ಯಾಟೋ ಸಣ್ಣಗೆ ಕಟ್ಟ ಮಾಡಿ ಹಾಗೆ ಕೋತಂಬ್ರಿನು ಕಟ್ಟ ಮಾಡಕೊಳ್ಳಿ ಎರಡು ಗಡ್ಡೆ ಬಳ್ಳೊಳ್ಳಿ ಸೊಪ್ಪೆ ತಗೆದು ಇಡಿ ಈಗ ಒಗ್ಗರಣೆ ಮಾಡಿ ಒಗ್ಗರಣೆಗೆ ಎರಡು ಸ್ಪೂನ್ ಎಣ್ಣೆ ಹಾಕಿ ಒಂದು ಕಡಾಯಿಗೆ, ಎಣ್ಣೆ ಕಾದ ನಂತರ ಜೀರಿಗೆ ಸಾಸುವೆ, ಚಟಪಡಿಸಿ, ಕರಿಬೇವು ಜಜ್ಜಿದ ಒಳ್ಳೊಳ್ಳಿ ಉಪ್ಪು ಅರಶಿನ ಪುಡಿ ಕಾರದ ಪುಡಿ, ಸಣ್ಣಗೆ ಕಟ್ಟ ಮಾಡಿದ ಟೊಮ್ಯಾಟೋ, ಹಾಗೆ ಶೇಂಗಾ ಪುಡಿ ಹಾಕಿ ಕೋತಂಬ್ರಿನು ಹಾಕಿ ಚನ್ನಾಗಿ ಮಿಕ್ಸ್ ಮಾಡಿ ನೀರು ಹಾಕದೆ ಬೇಯಲು ಬಿಡಿ ಎರಡು ನಿಮಿಶ, ನಂತರ ಚಪಾತಿ ಜೊತೆ ತಿನ್ನಲು ಕೊಡಿ, ಸೂಪರ್ ಇರುತ್ತೆ. ಅನ್ನದ ಜೊತೆ ರೊಟ್ಟಿ ಜೊತೆನು ಚನ್ನಾಗಿ ಇರುತ್ತೆ ಮಾಡಿ ನೋಡಿ ಫ್ರೆಂಡ್ಸ್.

Maavinakayi tambuli.

Image
Mixer ge coconut, turida mavinkayi, salt, hing, hasi mensu, swalpa ootada mosru haaki nunnage paste maadi. Amele paatre ge transfer maadi neeru haaki tellage maadi. Tuppada vagarane kodi.

Veg ನೂಡಲ್ಸ್ಜೊwith ಮಾಕ್ರೋನಿ

Image
ಇದು ಮಕ್ಕಳಿಗೆಲ್ಲ ಬಲು ಪ್ರಿಯ ಆದ್ರೆ ಹೆಚ್ಚಿಗೆ ತಿನ್ನಿಸ್ಬೇಡಿ...ಗೋಧಿದು ಸಿಕ್ಕಿದ್ರೆ ತುಂಬಾ ಒಳ್ಳೆದು ಹಾಗಾದ್ರೂ ತರಕಾರಿ ಹೊಟ್ಟೆಗೆ ಹೋಗುತ್ತೆ...ಕೆಲ ಮಕ್ಕಳು ತರ್ಕಾರಿ ತಿನ್ನಲ್ಲ...ನಾನು ತಿಂಗಳಲ್ಲಿ ಒಂದೆರೆಡು ಬಾರಿ ಮಾಡ್ತೀನಿ ಅಷ್ಟೇ... *ನಾನು Maggie Atta Noodles ಮತ್ತು Bambino Macroni ಉಪಯೋಗಿಸಿದ್ದೀನಿ... ಚೆನ್ನಾಗಿತ್ತು...ನೀವೂ ಮಾಡಿ ನೋಡಿ *ಮೊದಲು ಕುಧಿಯೋ ನೀರಿಗೆ ಎರೆಡು ಚಮಚ ಅಡಿಗೆ ಎಣ್ಣೆ ಅಥವಾ Vinegar ಹಾಕಿ ಮಾಕ್ರೋನಿ (2Cup)ಹಾಕಿ ಎರೆಡು ನಿಮಿಷ ಬಿಟ್ಟು ಬಸಿದು ಇಟ್ಕೊಳಿ... *ತರಕಾರಿ ಎಲ್ಲ ಉದ್ದುದ್ದ(Julian)Cut ಮಾಡಿ ಇಟ್ಕೊಳಿ... *ಈಗ ಒಂದು ಅಗಲವಾದ ಬಾಣಲೆಗೆ ಎಣ್ಣೆ ಹಾಕಿ ಕಾದ ಮೇಲೆ cut ಮಾಡಿದ ಈರುಳ್ಳಿ ಬೆಳ್ಳುಳ್ಳಿ ತರಕಾರಿ ಹುರಿದು ಕಾಳು ಮೆಣಸಿನ ಪುಡಿ,White Pepper pwdr, ಖಾರದ ಪುಡಿ, ಟೊಮೆಟೊ/Chilly/ಸೋಯಾ Sauce ಮೂರು ಎರೆಡೆರಡು ಚಮಚ ಹಾಕಿ 5Cups ನೀರು ಉಪ್ಪು ಹಾಕಿ ಕುದಿಯುವಾಗ ಬಿಸಿ ನೀರಲ್ಲಿ ಹಾಕಿ ಬಸಿದ ಮಾಕ್ರೋನಿ ಒಂದು Pkt Maggie (ಮಾಸಾಲೆಯೊಂದಿಗೆ)ಮುರಿದು ಹಾಕಿ 2ನಿಮಿಷ ಬಿಟ್ಟು Off ಮಾಡಿ 10ನಿಮಿಷ ಬಿಟ್ಟು Sauce ಹಾಕಿಕೊಂಡು ಜಮಾಯಿಸಿ... *ಇದು ಮೂರು ಜನಕ್ಕೆ ಆಗುತ್ತೆ* *ಮಕ್ಕಳಿಗೆ Lunch Box ಗೆ ಕಳಿಸೋದಾದ್ರೆ ಸ್ವಲ್ಪ ನೀರು ಜಾಸ್ತಿ ಹಾಕಿ ಮಾಡಿ ಕೊಟ್ಟರೆ ಒಣಗಿದ ಹಾಗೆ ಆಗದೆ fresh ಇರುತ್ತೆ* *ನೋಡ್ಕೋಳಿ ಮಾಡ್ಕೊಳಿ ತಿನ್ಕೊಳಿ ತುಂಬ